ನಾಡ ಸಂಚಾರಿ- ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಮರೆತುಹೋದ ಕತೆಗಳನ್ನು ಸಂಶೋಧನಾತ್ಮಕವಾಗಿ ದಾಖಲಿಸುವ ಡಿಜಿಟಲ್ ವೇದಿಕೆ.
ನಾನು ಹನಮಂತ ಕೊಪ್ಪದ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪ್ರಜಾವಾಣಿ ಮತ್ತು ಈದಿನ.ಕಾಂ ಸೇರಿದಂತೆ ಕನ್ನಡದ ಪ್ರಮುಖ ಮಾಧ್ಯಮಗಳಲ್ಲಿ ಸುಮಾರು 6 ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಕನ್ನಡದ ಅನೇಕ ಪತ್ರಿಕೆಗಳು ಮತ್ತು ಮ್ಯಾಗಜೀನ್‌ಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ.
ನಾಡ ಸಂಚಾರಿ ವೇದಿಕೆಯ ಮೂಲಕ ಕರ್ನಾಟಕದ ಶ್ರೀಮಂತ ಇತಿಹಾಸ, ಸಂಸ್ಕೃತಿ, ಪುರಾತನ ಸ್ಮಾರಕಗಳು, ದೇವಾಲಯಗಳು, ಕೋಟೆಗಳು ಮತ್ತು ಜನಪದ ಕಥೆಗಳನ್ನು ವಿಶ್ವಾಸಾರ್ಹ ಮೂಲಗಳು, ಪುರಾವೆಗಳು ಮತ್ತು ಸಂಶೋಧನೆಗಳ ಆಧಾರದ ಮೇಲೆ ಸರಳ ಹಾಗೂ ಸ್ಪಷ್ಟವಾಗಿ ಓದುಗರಿಗೆ ತಲುಪಿಸುವುದು ನನ್ನ ಉದ್ದೇಶವಾಗಿದೆ.
ಈ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಪ್ರತಿಯೊಂದು ಲೇಖನವೂ ಅಧ್ಯಯನ, field experience ಮತ್ತು ಸ್ವಂತ ಛಾಯಾಚಿತ್ರಗಳ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ. ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಇತಿಹಾಸಾಸಕ್ತರಿಗೆ ಉಪಯುಕ್ತವಾಗುವಂತಹ ವಿಷಯವನ್ನು ನೀಡಲು ನಾಡ ಸಂಚಾರಿ ಬದ್ಧವಾಗಿದೆ.
ನಾಡ ಸಂಚಾರಿ ಕೇವಲ Blog ಮಾತ್ರವಲ್ಲದೆ, Facebook,Youtube, X ಮತ್ತು Instagram ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕವೂ ವಿಷಯಗಳನ್ನು ಹಂಚಿಕೊಳ್ಳುತ್ತದೆ. ಈ ಪ್ರಯತ್ನವನ್ನು ಕನ್ನಡಿಗರು ಬೆಂಬಲಿಸಿ, ಪ್ರೋತಾಹಿಸಬೇಕು.