![]() |
| ಬೀದರ್ ಕೋಟೆ ವಶಕ್ಕಾಗಿ ನಡೆದ ಯುದ್ಧ (ಕಾಲ್ಪನಿಕ ಚಿತ್ರ) |
![]() |
| ಕಲಬುರಗಿ ಕೋಟೆ ಪ್ರವೇಶ ದ್ವಾರ |
ಬಹಮನಿ ರಾಜ್ಯದ ಆರಂಭ ಮತ್ತು ಗುಲ್ಬರ್ಗಾ ರಾಜಧಾನಿ
1347ರಲ್ಲಿ ಸ್ಥಾಪನೆಯಾದ ಬಹಮನಿ ಸುಲ್ತಾನಾತ್ ತನ್ನ ಪ್ರಾರಂಭಿಕ ವರ್ಷಗಳಲ್ಲಿ ಗುಲ್ಬರ್ಗಾವನ್ನು ರಾಜಧಾನಿಯಾಗಿ ಆಯ್ಕೆ ಮಾಡಿಕೊಂಡಿತ್ತು. ಗುಲ್ಬರ್ಗಾ ರಾಜಕೀಯವಾಗಿ ಮಹತ್ವದ ಕೇಂದ್ರವಾಗಿದ್ದರೂ, ಕಾಲಕ್ರಮೇಣ ಅಲ್ಲಿನ ಅರಮನೆ ರಾಜಕಾರಣವು ಒಳಜಗಳ, ದ್ವೇಷ ಮತ್ತು ರಕ್ತಪಾತಗಳಿಂದ ತುಂಬತೊಡಗಿತು. ಈ ಅಸ್ಥಿರ ಪರಿಸ್ಥಿತಿಯಲ್ಲೇ ಬಹಮನಿ ರಾಜವಂಶದ ಒಬ್ಬ ಪ್ರಮುಖ ಸುಲ್ತಾನನ ಆಡಳಿತ ಆರಂಭವಾಯಿತು.ಫಿರೋಜ್ ಷಾ: ಕಲಾವಿದ ಸುಲ್ತಾನ ಮತ್ತು ಅಸ್ಥಿರ ಉತ್ತರಾಧಿಕಾರ
ಫಿರೋಜ್ ಷಾ ಬಹಮನಿ ಬಹಮನಿ ರಾಜ್ಯದ ಎಂಟನೇ ಸುಲ್ತಾನನಾಗಿದ್ದು, ಸುಮಾರು 25 ವರ್ಷಗಳ ಕಾಲ ಆಳ್ವಿಕೆ ನಡೆಸಿದನು. ಆತ ಕೇವಲ ಯೋಧನಲ್ಲ; ಕವಿ, ಕಲಾಪೋಷಕ ಹಾಗೂ ವಿದ್ಯಾಪ್ರೇಮಿಯೂ ಆಗಿದ್ದನು. ಅವನ ಕಾಲದಲ್ಲಿ ಕಲೆ ಮತ್ತು ಸಾಹಿತ್ಯಕ್ಕೆ ಉತ್ತೇಜನ ದೊರಕಿದ್ದು, ಗಣಿತ ಮತ್ತು ಖಗೋಳಶಾಸ್ತ್ರದತ್ತ ವಿಶೇಷ ಆಸಕ್ತಿ ತೋರಿಸಲಾಯಿತು.
ಜೊತೆಗೆ ಸೂಫಿ ಪರಂಪರೆಗೆ ಗೌರವ ನೀಡಲಾಗುತ್ತಿತ್ತು. ಖ್ಯಾತ ಸೂಫಿ ಸಂತ ಬಂದೆ ನವಾಜ್ ಗೇಸುದರಾಜ್ ಕೂಡ ಇದೇ ಅವಧಿಯಲ್ಲಿ ಗುಲ್ಬರ್ಗಾದಲ್ಲಿ ವಾಸಿಸುತ್ತಿದ್ದರು. ಆದರೆ ಇಷ್ಟಾದರೂ ಅರಮನೆಯ ಒಳಜಗಳಗಳು ಸಂಪೂರ್ಣವಾಗಿ ನಿಂತಿರಲಿಲ್ಲ.
ಇದನ್ನೂ ಓದಿ: ಖಾಜಾ ಬಂದೆ ನವಾಜ್ ದರ್ಗಾ – ಸೂಫಿ ಪರಂಪರೆ ಮತ್ತು ಭಾವೈಕ್ಯದ ಸಂಕೇತ
![]() |
| ಖಾಜಾ ಬಂದೆ ನವಾಜರು ಮತ್ತು ಅಹ್ಮದ್ ಷಾ ವಲಿ |
ಅಹಮದ್ ಖಾನ್ ಮತ್ತು ಗದ್ದುಗೆ ಗುದ್ದಾಟ
ಫಿರೋಜ್ ಷಾ ಅವರ ಸಹೋದರ ಅಹಮದ್ ಖಾನ್, ಆರಂಭದಲ್ಲಿ ಅವರ ವಿಶ್ವಾಸಾರ್ಹ ಸಹಾಯಕನಾಗಿದ್ದ. ಆದರೆ ಫಿರೋಜ್ ಷಾ ಅನಾರೋಗ್ಯದಿಂದ ಬಳಲತೊಡಗಿದಾಗ, ಉತ್ತರಾಧಿಕಾರದ ಪ್ರಶ್ನೆ ಗಂಭೀರವಾಯಿತು.![]() |
| ಯುದ್ಧದಲ್ಲಿ ತೊಡಗಿರುವ ಅಹ್ಮದ್ ಷಾ ವಲಿ |
ಫಿರೋಜ್ ಷಾ ಮತ್ತು ಬಂದೆ ನವಾಜರ ನಿಧನ
ಅಹಮದ್ ಖಾನ್ ಸುಲ್ತಾನನಾದ ಕೆಲವೇ ದಿನಗಳಲ್ಲಿ ಫಿರೋಜ್ ಷಾ ನಿಧನರಾದರು. ಅದೇ ಸಮಯದಲ್ಲಿ, ಒಂದು ತಿಂಗಳ ಅಂತರದಲ್ಲಿ ಬಂದೆ ನವಾಜ್ ಗೇಸುದರಾಜ್ ಅವರೂ ತೀರಿಕೊಂಡರು. ಈ ಎರಡು ಮರಣಗಳು ಗುಲ್ಬರ್ಗಾದ ರಾಜಕೀಯ ಮತ್ತು ಧಾರ್ಮಿಕ ವಾತಾವರಣವನ್ನು ಮತ್ತಷ್ಟು ಅಸ್ಥಿರಗೊಳಿಸಿತು.ಇದನ್ನೂ ಓದಿ: ಸಾತ್ ಗುಂಬಜ್– ಕಲಬುರಗಿಯ ರಕ್ತಸಿಕ್ತ ಇತಿಹಾಸದ ಮೌನ ಸಾಕ್ಷಿ
ಅಹಮದ್ ಷಾ ವಲಿ ಮತ್ತು ರಾಜಧಾನಿ ಬದಲಾವಣೆಯ ನಿರ್ಧಾರ
ಈ ಅಶಾಂತಿಯ ನಡುವೆ, ಅಹಮದ್ ಖಾನ್ ಸುಲ್ತಾನನಾಗಿ ಅಹಮದ್ ಷಾ ವಲಿ ಎಂಬ ಹೆಸರನ್ನು ಸ್ವೀಕರಿಸಿದನು. ಅವನು ಅರಮನೆಯ ಒಳಜಗಳಗಳಿಂದ ದೂರ ಸರಿಯಲು ಮತ್ತು ಸ್ಥಿರ ಆಡಳಿತವನ್ನು ಕಟ್ಟಲು ಹೊಸ ರಾಜಧಾನಿಯ ಅಗತ್ಯವನ್ನು ಅರಿತುಕೊಂಡನು. ಅವನ ಗಮನ ಸೆಳೆದ ಸ್ಥಳವೇ ಬೀದರ್.ಬೀದರ್: ಭೌಗೋಳಿಕ ಮತ್ತು ರಾಜಕೀಯ ಲಾಭ
ಬೀದರ್ ದಖ್ಖನ್ ಪೀಠಭೂಮಿಯ ಎತ್ತರದ ಮೇಲೆ ಇದ್ದು, ನೈಸರ್ಗಿಕವಾಗಿ ರಕ್ಷಣಾತ್ಮಕವಾಗಿತ್ತು. ಆಳವಾದ ಕಂದಕಗಳನ್ನು ನಿರ್ಮಿಸಲು ಇದು ಅನುಕೂಲಕರವಾಗಿದ್ದು, ಕರೇಜ್ ಜಲವ್ಯವಸ್ಥೆಯಿಂದ ಸಮೃದ್ಧ ನೀರಿನ ಲಭ್ಯತೆ ಕೂಡ ಇತ್ತು. ಇವೆಲ್ಲವೂ ಬೀದರ್ ಅನ್ನು ರಾಜಧಾನಿಗೆ ಸೂಕ್ತ ಸ್ಥಳವಾಗಿಸಿತು. ಜೊತೆಗೆ, ಗುಲ್ಬರ್ಗಾದ ರಕ್ತಪಾತದ ನೆನಪುಗಳಿಂದ ದೂರ ಸರಿಯುವ ಅವಕಾಶವನ್ನೂ ಬೀದರ್ ಒದಗಿಸಿತು.
![]() |
| ಬೀದರ್ ಕೋಟೆ |
ಬೀದರ್ ನಗರಕ್ಕೆ ರಾಜಧಾನಿ ಪಟ್ಟ
1432ರಲ್ಲಿ ಅಹಮದ್ ಷಾ ವಲಿ ಅಧಿಕೃತವಾಗಿ ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀದರ್‌ಗೆ ವರ್ಗಾಯಿಸಿದರು. ಈ ನಿರ್ಧಾರದಿಂದಲೇ ಬೀದರ್‌ನ ಗತವೈಭವದ ಅಧ್ಯಾಯ ಆರಂಭವಾಯಿತು.ಇದನ್ನೂ ಓದಿ: ಬೀದರ್ ಕೋಟೆ: ಯುದ್ಧತಂತ್ರ, ವಾಸ್ತುಶಿಲ್ಪ ಮತ್ತು ಅಜೇಯತೆ
ಸಾಮಾಜಿಕ ಸಾಮರಸ್ಯ ಮತ್ತು ಸೂಫಿ ಪ್ರಭಾವ
ಸ್ಥಳೀಯ ಜನಪದ ಮತ್ತು ಇತಿಹಾಸಿಕ ಪರಂಪರೆಯ ಪ್ರಕಾರ, ಫಿರೋಜ್ ಷಾ ವಿರುದ್ಧ ನಡೆದ ಸಂಘರ್ಷದ ಸಮಯದಲ್ಲಿ ಮುತ್ಯಾಲದ ಜಂಗಮರು ಅಹಮದ್ ಷಾಗೆ ಬೆಂಬಲ ನೀಡಿದ್ದರು. ಈ ಬೆಂಬಲ ಧಾರ್ಮಿಕ ಕಾರಣಕ್ಕಿಂತಲೂ ರಾಜಕೀಯ ಸ್ಥಿರತೆ ಮತ್ತು ನ್ಯಾಯದ ನಿರೀಕ್ಷೆಯಿಂದ ಹುಟ್ಟಿತ್ತು.![]() |
| ಬಹಮನಿ ಸುಲ್ತಾನ ಅಹ್ಮದ್ ಷಾ ವಲಿ |





