![]() |
| ತ್ರಿವರ್ಣ ಧ್ವಜ ತಯಾರಿಕೆಯಲ್ಲಿ ನಿರತಳಾದ ಮಹಿಳೆ |
ತ್ರಿವರ್ಣ ಧ್ವಜವು ಕೇವಲ ಬಟ್ಟೆಯ ತುಂಡು ಅಲ್ಲ. ಅದು ಭಾರತದ ಸ್ವಾತಂತ್ರ್ಯ ಹೋರಾಟದ ಸಂಕೇತ, ತ್ಯಾಗದ ನೆನಪು ಮತ್ತು ರಾಷ್ಟ್ರಾಭಿಮಾನದ ಪ್ರತೀಕ. ಕೇಸರಿ ಬಣ್ಣವು ತ್ಯಾಗ ಮತ್ತು ಧೈರ್ಯವನ್ನು ಸೂಚಿಸಿದರೆ, ಬಿಳಿ ಬಣ್ಣವು ಶಾಂತಿ ಮತ್ತು ಸತ್ಯವನ್ನು ಪ್ರತಿನಿಧಿಸುತ್ತದೆ. ಹಸಿರು ಬಣ್ಣವು ಸಮೃದ್ಧಿ ಮತ್ತು ಅಭಿವೃದ್ಧಿಯನ್ನು ಸೂಚಿಸುತ್ತದೆ. ಮಧ್ಯದಲ್ಲಿರುವ ಅಶೋಕ ಚಕ್ರವು ಧರ್ಮ ಮತ್ತು ನ್ಯಾಯದ ಸಂಕೇತವಾಗಿದೆ.
ಆದರೆ ನಮ್ಮ ರಾಷ್ಟ್ರಧ್ವಜವನ್ನು ಬಳಸುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಇದಕ್ಕಾಗಿ ಭಾರತ ಸರ್ಕಾರವು 2002ರಲ್ಲಿ Flag Code of India ಅನ್ನು ಜಾರಿಗೆ ತಂದಿತು. ಈ ಸಂಹಿತೆಯಲ್ಲಿ ರಾಷ್ಟ್ರಧ್ವಜವನ್ನು ಹೇಗೆ ತಯಾರಿಸಬೇಕು, ಹೇಗೆ ಹಾರಿಸಬೇಕು, ಹೇಗೆ ಮಡಚಬೇಕು ಎಂಬುದಕ್ಕೆ ಸ್ಪಷ್ಟ ನಿಯಮಗಳಿವೆ. ರಾಷ್ಟ್ರಧ್ವಜದ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.
ಇದನ್ನೂ ಓದಿ: ಭಾರತೀಯ ರೈಲ್ವೆ ಇತಿಹಾಸ ತಿಳಿಸುವ ಹುಬ್ಬಳಿ ರೈಲು ಮ್ಯೂಸಿಯಂ
![]() |
| ಗರಗ ಗ್ರಾಮದ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ |
ತಿರಂಗಕ್ಕೂ ಧಾರವಾಡಕ್ಕೂ ಇರುವ ವಿಶೇಷ ನಂಟು
ಬಹುತೇಕ ಭಾರತೀಯರಿಗೆ ತಿಳಿಯದ ಒಂದು ಮಹತ್ವದ ಸಂಗತಿ ಎಂದರೆ- ದೇಶದ ರಾಷ್ಟ್ರಧ್ವಜ ತಯಾರಿಕೆಯಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ.ಧಾರವಾಡ ಜಿಲ್ಲೆಯ ಗರಗ ಗ್ರಾಮ ಮತ್ತು ಹುಬ್ಬಳ್ಳಿಯ ಬೆಂಗೇರಿ ಪ್ರದೇಶಗಳು ರಾಷ್ಟ್ರಧ್ವಜ ತಯಾರಿಕೆಯಲ್ಲಿ ಪ್ರಮುಖ ಕೇಂದ್ರಗಳಾಗಿವೆ. ಇಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಹಲವು ದಶಕಗಳಿಂದ ರಾಷ್ಟ್ರಧ್ವಜ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸಿದೆ.
ಈ ಸಂಸ್ಥೆಯನ್ನು 1957ರಲ್ಲಿ ಗಾಂಧಿವಾದಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಸ್ಥಾಪಿಸಿದರು. ಇದರ ಉದ್ದೇಶ ಖಾದಿ ಉತ್ಪನ್ನಗಳನ್ನು ಉತ್ತೇಜಿಸುವುದು ಹಾಗೂ ಗ್ರಾಮೀಣ ಉದ್ಯೋಗವನ್ನು ಹೆಚ್ಚಿಸುವುದಾಗಿತ್ತು. ನಂತರ ಈ ಸಂಸ್ಥೆ ರಾಷ್ಟ್ರಧ್ವಜ ತಯಾರಿಕೆಯಲ್ಲಿ ಪರಿಣತಿ ಪಡೆದುಕೊಂಡಿತು. 2004ರಲ್ಲಿ Bureau of Indian Standards ಈ ಸಂಸ್ಥೆಗೆ ರಾಷ್ಟ್ರಧ್ವಜ ತಯಾರಿಕೆಗೆ ಮಾನ್ಯತೆ ನೀಡಿತು.
ಹುಬ್ಬಳ್ಳಿಯ ಬೆಂಗೇರಿಯಲ್ಲಿ ರಾಷ್ಟ್ರಧ್ವಜ ತಯಾರಿಕೆಗೆ ವಿಶೇಷ ಘಟಕ ಸ್ಥಾಪಿಸಲಾಯಿತು. ಇಲ್ಲಿ ಧ್ವಜದ ಹೊಲಿಗೆ, ಬಣ್ಣ ಹಚ್ಚುವುದು, ಅಶೋಕ ಚಕ್ರ ಮುದ್ರಣ ಮತ್ತು ಪ್ಯಾಕಿಂಗ್ ಕೆಲಸಗಳು ನಡೆಯುತ್ತವೆ. ಗರಗ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಖಾದಿ ಬಟ್ಟೆ ನೆಯ್ದು ಈ ಘಟಕಕ್ಕೆ ಕಳುಹಿಸಲಾಗುತ್ತದೆ.
ಭಾರತದಲ್ಲಿ ಒಟ್ಟು ಒಂಬತ್ತು ವಿವಿಧ ಗಾತ್ರಗಳಲ್ಲಿ ರಾಷ್ಟ್ರಧ್ವಜ ತಯಾರಿಸಲಾಗುತ್ತದೆ. ಉದಾಹರಣೆಗೆ:
ಈ ಎಲ್ಲಾ ಧ್ವಜಗಳು ಗುಣಮಟ್ಟ ಪರೀಕ್ಷೆಗೆ ಒಳಪಟ್ಟ ಬಳಿಕ ಮಾತ್ರ ಬಳಕೆಗೆ ಬರುತ್ತವೆ.
![]() |
| ತ್ರಿವರ್ಣ ಧ್ವಜ ತಯಾರಿಕೆ |
ರಾಷ್ಟ್ರಧ್ವಜ ತಯಾರಿಕೆಯ ಕಠಿಣ ಪ್ರಕ್ರಿಯೆ
ತ್ರಿವರ್ಣ ಧ್ವಜ ತಯಾರಿಸುವುದು ಸಾಮಾನ್ಯ ಕೆಲಸವಲ್ಲ. ಇದಕ್ಕೆ ಹಲವು ಹಂತಗಳ ಪರಿಶ್ರಮ ಬೇಕಾಗುತ್ತದೆ. ಸಾಮಾನ್ಯವಾಗಿ ಧ್ವಜ ತಯಾರಿಕೆಯಲ್ಲಿ ಈ ಹಂತಗಳು ಇರುತ್ತವೆ:- ನೂಲು ಕಟ್ಟಿ ತಯಾರಿಸುವುದು
- ಕೈಯಿಂದ ನೇಯ್ಗೆ ಮಾಡುವುದು
- ಬ್ಲೀಚಿಂಗ್ ಪ್ರಕ್ರಿಯೆ
- ಕೇಸರಿ, ಬಿಳಿ, ಹಸಿರು ಬಣ್ಣ ಹಚ್ಚುವುದು
- ಅಶೋಕ ಚಕ್ರವನ್ನು ಮುದ್ರಿಸುವುದು
- ಹೊಲಿಗೆ ಮತ್ತು ಅಂತಿಮ ಮಡಚುವಿಕೆ
ಭಾರತದಲ್ಲಿ ಒಟ್ಟು ಒಂಬತ್ತು ವಿವಿಧ ಗಾತ್ರಗಳಲ್ಲಿ ರಾಷ್ಟ್ರಧ್ವಜ ತಯಾರಿಸಲಾಗುತ್ತದೆ. ಉದಾಹರಣೆಗೆ:
- ಅತ್ಯಂತ ಚಿಕ್ಕ ಧ್ವಜ- 1.5 × 1 ಇಂಚು
- ದೊಡ್ಡ ಧ್ವಜ-14 × 21 ಅಡಿ
ಈ ಎಲ್ಲಾ ಧ್ವಜಗಳು ಗುಣಮಟ್ಟ ಪರೀಕ್ಷೆಗೆ ಒಳಪಟ್ಟ ಬಳಿಕ ಮಾತ್ರ ಬಳಕೆಗೆ ಬರುತ್ತವೆ.
![]() |
| ತ್ರಿವರ್ಣ ಧ್ವಜ ತಯಾರಿಕೆಯಲ್ಲಿ ನಿರತಳಾದ ಮಹಿಳೆ |





.jpg)